ನನ್ನ ಬರವಣಿಗೆ

ಬರವಣಿಗೆ ಸುಮ್ಮನೆ
ರಚಿತವಾಗುವುದಿಲ್ಲ ಅದಕ್ಕೆ,
ಅದರದೇ ಸತ್ವ,
ಗುಣಗಳನ್ನು
ಹೊಂದಿರುತ್ತವೆ.
ನಮ್ಮ ಈ ಸಣ್ಣ(ವರ) ಬರವಣಿಗೆಯಲ್ಲಿ
ಎಷ್ಟೊಂದು ಶ್ರಮ – ಕಾಳಜಿ
ತೆಗೆದುಕೊಳ್ಳಬೇಕಾಗುತ್ತದೆ.
ಗೊತ್ತಿಲ್ಲ,
ನಮ್ಮ ತಪ್ಪುಗಳು ಎಲ್ಲೆಲ್ಲಿ
ಆಗುತ್ತಾವೆಯೋ
ಅಲ್ಲಲ್ಲಿ, ನಮ್ಮ
ಇಂದ್ರಿಯಾಗಳು
ಜೋಪಾನದಿಂದ
ತಟ್ಟಿದರೆ, ಈ
ಸಾಹಿತ್ಯದ ಸಾಗರದಲ್ಲಿ
ನಮ್ಮ ಚಿಕ್ಕ
ಹಾಳೆಯ ಹಡಗಿನೊಂದಿಗೆ
ಪಯಣದ ಹಾದಿ
ಸಾಗುವಿಕೆಗೆ
ನಿಶಾನೆ ತೋರಿದಂತಾಗುತ್ತದೆ.

ಕಲಿಸು

ಕಲಿ ಕಲಿಸು ಇದು ಇಂಡಿಯಾ ಫೌಂಡೆಶನ್ ಫರ್ ದಿ ಆರ್ಟ್ಸ್ ಯೋಜನೆಯಡಿಯಲ್ಲಿ ಶಾಲೆಯ ನಾಟಕ ಶಿಕ್ಷಕರಾದ ಗುರುರಾಜ್.ಎಲ್ ಆದ ನನಗೆ ವಯುಕ್ತಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಆಯ್ಕೆ ಮಾಡಿದ್ದು ಯೋಜನೆಯಡಿಯಲ್ಲಿ ಕೈಗೊಂಡ ಚಟುವಟಿಕೆಗಳನ್ನು ಈ ಹಾಳೆಯಲ್ಲಿ ದಾಖಲಿಸಲಾಗುತ್ತದೆ.