ವಲಯ ಮಟ್ಟದ ವಿಜ್ಜಾನ ನಾಟಕ ಸ್ಪರ್ದೆ

ಚಿತ್ರದುರ್ಗದಲ್ಲಿ ನಡೆಯುವ ವಲಯ ಮಟ್ಟದ ವಿಜ್ಜಾನ ನಾಟಕ ಸ್ಪರ್ಧೆಗೆ ನಮ್ಮ ಪ್ರೌಢಶಾಲೆಯಿಂದ “ನಮ್ಮೂರ ಕೆರೆ” ಎಂಬ ನಾಟಕವನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ದಿನಾಂಕ ೧೧.೧೧.೨೦೧೪ ರಂದು.

ಸಿದ್ಧಿ ಫೌಂಡೇಷನ್ – ಕಥಾಸಮಯ

ಮಕ್ಕಳಿಗಾಗಿ ನಡೆಸುವ ಕಥಾ ಕಮ್ಮಟಗಳು ಸಿದ್ಧಿ ಫೌಂಡೇಶನ್ ತುಂಭಾ ಚೆನ್ನಾಗಿ ಮೂಡಿ ಬರುತ್ತಿದೆ. ತಮ್ಮೊಂದಿಗೆ ಮಾತಾನಾಡಿ ಕಥಾ ಕಮ್ಮಟವನ್ನು ಆಯೋಜಿಸುವ ಶಾಲೆಗಳಿಗೆ ಬೇಟಿ ನೀಡಿ ಮಕ್ಕಳೊಂದಿಗೆ ತಮ್ಮ ಕಥಾ ನಿರೂಪಣಾ ಶೈಲಿಯಿಂದ ಮಕ್ಕಳಲ್ಲಿ ಆಸಕ್ತಿಯನ್ನು ತಂದು ಬಿಡುತ್ತಾರೆ. ನಂತರದಲ್ಲಿ ಮಕ್ಕಳು ಕಥೆಯ ಸೆಳವಿನಲ್ಲಿಯೇ ಸಾಗಿ, ತಮ್ಮದೇ ಗ್ರಾಮ್ಯ ಭಾಷೆ ಅಥಾವ ಶಿಷ್ಟ ಭಾಷೆಯಲ್ಲಿ ಕಥಾ ತಂತ್ರಗಳನ್ನು ಜೋಡಿಸಿ ಕಥೆ ಕಟ್ಟುವಲ್ಲಿ  ಯಶಸ್ವಿಯಾಗಿದ್ದಾರೆ. ಮಕ್ಕಳನ್ನು ಕಥೆಗಾರರನ್ನಾಗಿ ರೂಪಿಸುವ ’ಸಿದ್ಧಿ ಫೌಂಡೇಶನ್’ ಎಲ್ಲ ಬಳಗಕ್ಕೂ ದನ್ಯಾವಾದಗಳನ್ನು ತಿಳಿಸುತ್ತಾ, ಅದರಲ್ಲೂ ಶ್ರೀಮತಿ ಪದ್ಮಾ ಸತ್ಯಮೂರ್ತಿ ಹಾಗೂ ಶ್ರೀ ಮೇಘಾಶ್ಯಾಮ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಸದಾ ಮಕ್ಕಳಿಗೆ ಹೊಸತನ್ನು ನೀಡುವ ಮನಸ್ಸು ನಿಮ್ಮದಾಗಲಿ.

Meghshyam DSC08131

ಮೊಹರಂನ ಛಾಯಚಿತ್ರಗಳು

Jg4IMG_20141104_212022753Jg2

Jg3

Jg1Gajendragada

ಮೊಹರಂ (ಅಲಾವಿ) ಹಬ್ಬದ ಶುಭಾಷಯಗಳು

ನನ್ನಮ್ಮ ಮೊಹರಂನ ದಿನಗಳನ್ನು ನೆನೆಪಿಸಿಕೊಳ್ಳುವುದರೊಂದಿಗೆ,  ನನಗೆ ನನ್ನ ನೆನಪಿನಾಳದ ಯಾವ ಯಾವ ತುದಿಗೆ ಕರೆದುಕೊಂಡು ಸಾಗಿತು. ೧೫- ೧೬ ವರ್ಷದ ಹಿಂದೆ ಮೊಹರಂನ ಕತಲ್ ರಾತ್ರಿಯಂದು ಬೆಂಕಿ ತುಳಿಯೋದನ್ನು ನೋಡಲಿಕ್ಕೆ ಅಂತನೇ ಸಾಗಿದರು ಅದು ಸಾಕಾಗಿ ಮರಳಿ ಬಂದು ಮಲಗಿದ್ದು ಇದೆ. ಇಂದು ನೋಡಲೇ ಬೇಕು ಎಂದು ಸಾಗಿದ್ದ ದಿನವೇ ಒತ್ತಾಯ ಪೂರ್ವಕವಾಗಿ ಕಣ್ಣು ತೆರೆಯದಷ್ಟು ನಿದ್ದೆ, ಆಕಳಿಕೆ ತನ್ನ ಪ್ರಭಾವವನ್ನು ತೋರಿಸಿಯೇ ಬಿಡುತ್ತಿತ್ತು. ಗೆಳೆಯರೊಂದಿ ಸಾಗಿದ್ದರು ಅದು ಯಾವುದೋ ಕಾರಣಕ್ಕೆ ನೋಡಲು ಆಗದೇ ದೇವರು ಸಾವರಿ ಹೊರಟಾಗ ನಮ್ಮ ಕಣ್ಣಿಗೆ ಬೀಳುತ್ತಿದ್ದವು. ಅಮ್ಮ ನೀನು ಇಷ್ಟೇ ಯಾರ ಯಾರ ಜೊತೆ ಎಲ್ಲೇಲ್ಲಿ ತಿರುಗುತ್ತೀಯೋ ಎಂದು ಬಯ್ದಾಗ ಹಾಗೇ ಹಾಸಿಗೆ ಮೇಲೆ ಉರುಳಿ ನಿದ್ದೆಗೆ ಜಾರುತ್ತಿದ್ದೆ.

Gajendragada

ಕಳೆದ ವರ್ಷ ನಾನು ನಮ್ಮ ಶಾಲೆಯಲ್ಲಿ ನಡೆಸಿದ ಯೋಜನೆಯಲ್ಲಿ ಮೊಹರಂ ಹಿನ್ನಲೆ ಹುಡುಕುವುದಕ್ಕೆ ಮಕ್ಕಳೊಂದಿಗೆ ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ. ಮೊಹರಂನ ಇತಿಹಾಸದಿಂದ ಹಿಡಿದು ಪ್ರಸ್ತುತ ಸನ್ನಿವೇಷದವರೆಗೂ ಒಬ್ಬ ವಿದ್ಯಾರ್ಥಿಯಾಗಿ ಕೇಳಿ ಟಿಪ್ಪಣಿ ಮಾಡಿಕೊಂಡೆ. ಅದರ ಆಧಾರದ ಮೇಲೆ ನಮ್ಮೂರ ಹಬ್ಬ ಎಂಬ ನಾಟಕವನ್ನು ಇಂಪ್ರೋವೈಜೇಷನ್ ಮಾಡಿ ಆಡಿಸಿದ್ದು ಆಗಿದೆ. ಅಂದು ಜಾಹಗೀರ್ ಗುಡದೂರಿನ ಮೊಹರಂ ಹಬ್ಬದಲ್ಲಿ ಅದು ಕುಣಿಯ ಮುಂದೆ ಕುಣಿಯುವ ಆಟವನ್ನು ಕಾಣಲೇ ಬೇಕು ಎಂದು ಹಾಜರಾಗಿದ್ದೆ. ನಮ್ಮ ಹಳೇಯ ವಿದ್ಯಾರ್ಥಿ ಸಾರಾಯಿ ಮಾರುವವ ( ಈ ಸಾರಾಯಿ ಅಂಗಡಿ ಶಿಕ್ಷಕರು ಹಾಗೂ ಊರವರೆಲ್ಲರ ಹೇಳಿಕೆಯಿಂದಾಗಿ ಮುಚ್ಚಿಸಲಾಗಿದೆ.) ನಾನು ಬಂದಿರುವದನ್ನು ಕಂಡು ಅವನಿಗೆ ಕಸಿವಿಸಿ. ಹೇಗೆ….. ವ್ಯಾಪರ ಬಿಟ್ಟು,  ಸಾರ್ ಹತ್ತಿರ ಹೋಗೋದು ಹೇಗೆ ? ಅವನು ಆಲೋಚನೆಯಲ್ಲಿ ಮುಳುಗಿ ಅತ್ತಿಂದಿತ್ತಾ ಓಡಾಡತೊಡಗಿದ. ನಾನು ಅವನನ್ನು ಗಮನಿಸುತ್ತಲೇ ಅವನ ಸಮಾಧಾನಕ್ಕಾಗಿ ದೇವಾಸ್ಥಾನದ ಕಡೇ ಇತರೇ ಜನರೊಂದಿಗೆ ಸಾಗಿದೆ.

ಈ ಬಾರಿ ಹಬ್ಬದ ತೀವ್ರತೆ ಸಾಧರಣವಾಗಿದ್ದರು ಜನರ ಪಾಲ್ಗೋಳ್ಳುವಿಕೆ ಸಂಭ್ರಮವೇ ಸಂಭ್ರಮ. ದುಲ್ಯಾ…. ದುಲ್ಯಾ  ಎಂದು ಹೂ, ಸಕ್ಕರೆ. ಗಂಧ, ಬಟ್ಟೆ ಹಿಡಿದು ಮನೆ ಮಂದಿಯೆಲ್ಲ ದೇವರು ಕೂರಿಸಿದ್ದ ಜಾಗಕ್ಕೆ ಹೋಗಿ ಬೆಂಕಿಯ ಕುಣಿ ಸುತ್ತಾ ತಿರುಗಿ ದೇವರ ಮುಂದೆ ಹೋಗಿ ಮೌಲ್ವಿಗೆ ತಂದ ಸಾಮನುಗಳನ್ನೆಲ್ಲ ನೀಡಿ ಹೊದಿಕೆ ಮಾಡಿಸಿಕೊಂಡು ಮರಳಿ ಮನೆ ಕಡೇ ತಿರುಗುವುದು.

“ಸರಿಯಾಗಿ ನಡೆದು ಕೊಂಡವರಿಗೆ ಬೆಂಕಿ ತಣ್ಣಗೆ ಇರುತ್ತದೆ. ಅದೇ ನಮ್ಮಂಥವರು ಹೋದರೆ ಸುಟ್ಟು ಬೂದಿಯಾಗಿ ಹೋಗ್ತೀವಿ” ಎಂದು ಅಮ್ಮ ತನ್ನ ತಟ್ಟೆಯಲ್ಲಿದ್ದ ರೊಟ್ಟಿ ತಿನ್ನುತ್ತಾ ಹೇಳಿದಾಗ. ನನ್ನ ತಂಗಿ ಜೋರಾಗಿಯೇ ನಗತೊಡಗಿದಳು. ನಾನು ನೀನು ಹೇಳಿದ್ದು ಸರಿ ಅಮ್ಮ ಎಂದು ಉತ್ತರ ನೀಡಿ ನಗು ನಿಲ್ಲಿಸಿದ ತಂಗಿಗೆ ಹೇಳಿದೆ. ಯಾರ ಭಾವನೆಗಳಿಗೂ, ನಂಬಿಕೆಗಳಿಗೆ ಧಕ್ಕೆಯಾಗದೇ ನಾವು ಆಲೋಚಿಸಬೇಕು. ನಂಬಿಕೆ ಸರಿ ಆದರೆ ಮೂಢನಂಬಿಕೆಯಾಗಬಾರದು. ಇಲ್ಲಿ ಜನರ ಉತ್ಸಾಹ, ಭಾಗುವಹಿಸುವಿಕೆ ಧರ್ಮಾ ಧರ್ಮಗಳ ಒಂದುಗೂಡಿ ಆಚರಿಸುವ ಸ್ಥಿತಿ ಬಂದಿದೆ. ಭೂತದಲ್ಲಿ ಅದು ಏನಾಗಿದೆ ಎನ್ನುವುದಕ್ಕಿಂತ ದುಃಖದ ಹಬ್ಬ ಇಂದು ಸಂಭ್ರಮದಲ್ಲಿ ತೇಲುವುದನ್ನು ನಾವು ಕಾಣಬಹುದಾಗಿದೆ. ಎಂದು ತಂಗಿ ನಾನು ಚರ್ಚಿಸಿದೆವು. ನಾವು ಹಿರಿಯರ ಭಾವನೆಗಳನ್ನು ಗೌರವಿಸಿ ಆಚರಣೆಯನ್ನು ಕಾಣಬೇಕಾಗಿದ್ದು ಮುಖ್ಯ. ಸ್ವಲ್ಪ ಎನ್ನುವುದಕ್ಕಿಂತ ಹಲವರು ಮಧ್ಯಪಾನದಂಥ ಚಟಗಳಿಗೆ ದಾಸರಾಗಿ, ಅತಿರೇಕವಾಗುವುದು ಅದು ಗಲಭೆಗೆ ಕಾರಣವಾಗುತ್ತದೆ. ಅದರಿಂದ ಸಂಭ್ರಮವಾಗಬೇಕಾದ ಆಚರಣೆ ಮತ್ತೋಂದು ದಿಕ್ಕಿಗೆ ಸಾಗುದು ಸರಿಯಲ್ಲ.

ಎಲ್ಲರಿಗೂ ಮೊಹರಂ (ಅಲಾವಿ) ಹಬ್ಬದ ಶುಭಾಷಯಗಳು.

……………………..

ಖಾಲಿ ಖಾಲಿ ಯಾವಗಲು, ಏನೆಲ್ಲ ಮಾಡಬೇಕು ಅನ್ನೋ ಆಲೋಚನೆ ಬಂದರು ಎಲ್ಲೋ ಸೋಮಾರಿ ತನ ನಮ್ಮನ್ನು ಆವರಿಸಿಕೊಳ್ಳುತ್ತದೆ. ನಾಳೆ ದಿಸೆಂಬರ್ ಬಂದರೇ ಆರು ವರ್ಷಗಳೇ ಕಳೆದು ಹೋಗುತ್ತದೆ ನಾನು ಸರ್ಕಾರಿ ನೌಕರಿಗೆ ಹತ್ತಿ. ಏನೆಲ್ಲ ಮಾಡಿದೆ… ? ಏನು ಇಲ್ಲ್ಲ. ದಿನ ಬೆಳಿಗ್ಗೆ ೯.೦೦ ಕ್ಕೆ ಮನೆ ಬಿಟ್ಟು ಸಮ್ಜೆ ೬.೦೦ ಕ್ಕೆ ಮರಳಿ ಮನೆ ಸೇರೋದು. ಪಾಠ, ನಾಟಕ, ಸ್ಪರ್ಧೆ ಏನೆಲ್ಲ ಇದ್ದರೂ ನಾನು ಖಾಲಿ ಮನುಷ್ಯನೇ.  ಮಕ್ಕಳಿಂದ ಕೇಳಿ ತಿಳಿದುಕೊಂಡಿದ್ದ ಮೊಹರಂ ಕುರಿತು, ಸೋಬಾನೆ ಪದಗಳ ಕುರಿತು ಆಸಕ್ತಿ ವಹಿಸಿ ಅವರಿಂದಲೇ ಏನೇನೋ ಕಾರ್ಯ ಮಾಡಿಸಿಕೊಂಡೇ. ಸೋಬಾನೆ ಪದಗಳನ್ನು ಮಕ್ಕಳ ಪಾಲಕರಿಂದಲೇ ಹಾಡಿಸಿ, ಮಕ್ಕಳಿಗೆ ಕಲಿಸುವ ಪ್ರಯತ್ನ ಪಟ್ಟು ಅವುಗಳನ್ನು ರಂಗದಲ್ಲಿ ಅಳವಡಿಸುವಿದಷ್ಟೇ ನನ್ನ ಕೆಲಸ. ಮೊಹರಂ ಸಡಗರದಲ್ಲಿ ಬೆರೆಯುವ ಹಬ್ಬದ ಆಚರಣೆಯಲ್ಲಿ ಲೀನಾವಾಗುವ ಇಡೀ ಊರನ್ನು ನಾನು ನನ್ನ ತಿಳುವಿಗಾಗಿ ಶಾಲೆಗೆ ಕರೆಯಿಸಿ  ಆ ಹಿರಿಯರಿಂದ ಮೊಹರಂ ಕುರಿತು ತಿಳಿಸುವ ಪ್ರಯತ್ನದಲ್ಲಿ ನಾನು ತಿಳಿದುಕೊಳ್ಳುತ್ತಾ ಅವರ ಹೆಜ್ಜೆಗೆ ಹೆಜ್ಜೆ ಸೇರಿಸಿದೆ.